Write For Us

Lahari Mahesh New Durga Song #shorts #durgasong #durgapuja #durgapuja2025 #durga #dasara

E-Commerce Solutions SEO Solutions Marketing Solutions
26 Views
Published
Lahari Mahesh New Durga Song #shorts

#laharimahesh #durgasong #durgapuja #durgapuja2025 #durga #durgapooja #dasara
#chamundi #kateelu

Lyrics :
ಪಲ್ಲವಿ :-
ದುರ್ಗೆ ದುರ್ಗೆ ನವದುರ್ಗೆ
ದುರ್ಗಾ ಪರಮೇಶ್ವರಿ ಮಾತೆ |
ಉಗ್ರ ಶಕ್ತಿಯ ಜಗದಂಬಾ
ಭವಾನಿ ಮಹಾಕಾಳಿ ಮಾತೆ |
ಉಗ್ರ ಜ್ವಾಲೆಯ ವಿಶ್ವ ರೂಪಿಣಿ
ಶಾರ್ವರೀ ಸಮಯದ ಜಗನ್ಮೋಹಿನಿ |
ಮಹಿಷಾಸುರ ಮರ್ದಿನಿ
ಬ್ರಹ್ಮಾoಡ ಸೃಷ್ಟಿ ಕಾರಿಣಿ |
ದುರ್ಗೆ ದುರ್ಗೆ ನವದುರ್ಗೆ
ದುರ್ಗಾ ಪರಮೇಶ್ವರಿ ಮಾತೆ |

ಚರಣ -1
ಶಕ್ತಿಯ ಉತ್ತುಂಗದ ಶೈಲ ಪುತ್ರಿ
ಮಾತೇ ಪಾರ್ವತಿ |
ಭೈರವಿ ಶಂಕರಿ ವಾಸವು ಹಿಮಗಿರಿ
ದುಷ್ಟ ಭಯಂಕರೀ |
ಸ್ಥಿರ ಸಂಯಮದ ಬ್ರಹ್ಮಚಾರಿಣಿ
ಶಿವ ಸಮ್ಮೋಹಿನಿ |
ಅಣು ಅಣು ಕಣದಲೀ ಶಕ್ತಿ ಸಂಚಾರಿಣಿ ರುದ್ರನ ಅರ್ಧಾಂಗಿನಿ |
ಅಸುರರ ನಡುಗಿಸೋ ಚಂದ್ರಘಂಟ
ಯುದ್ಧ ಭೂಮಿಯಲಿ ರಣಚಂಡಿ |
ಜಗತ್ ಜನನಿ ದೇವೀ ಕೂಷ್ಮಾಂಡಾ
ಭಕ್ತಿ ಸಾಗರದಿ ನಾ ಬಂಧಿ!

ನೀ ತಾಂಡವ ಮಾಡಲು ನಿಂತರೆ ಜಗತ್ ಪ್ರಳಯಾ |

ಚರಣ -2
ಮಮತೆಯ ಕಡಲಿನ ಸ್ಕಂದಮಾತೇ
ವಾತ್ಸಲ್ಯ ಭರಿತೆ |
ಪ್ರಕೃತಿ ಉಗಮದ ಸುಕೃತಿ ದಾತೆ
ತಾಯಿ ಜಗನ್ಮಾತೆ |
ದೈತ್ಯ ವಿನಾಶಿನಿ ಕಾತ್ಯಾಯಿನಿ
ಭದ್ರಕಾಳಿಯೂ ನೀ |
ಕಾಳರಾತ್ರಿಯ ಘೋರ ರೂಪವೇ
ದುಷ್ಟ ಸಂಹಾರಿಣಿ |
ಭಕ್ತರ ಸಲಹುವ ಮಹಾಗೌರಿ ನೀ
ರೂಪ ಮನೋನ್ಮನೀ |
ಖಡ್ಗ ಮಾಲಿನಿ ರುಂಡ ಧಾರಿಣಿ
ಚೇತನ ವರ್ಧಿನಿ |

ನೀ ಬೇಡುವ ವರವನು ನೀಡೊ ಸಿದ್ಧಿಧಾತ್ರಿ....
------------------
Category
सितारे - Stars
Tags
kannada bhakti songs, kannada devotional songs, lahari mahesh
Sign in or sign up to post comments.
Be the first to comment